Book Details
BACK
Title |
TOLKĀPPIYAM (KANNADA) |
Author |
Dr. Jayalalithaa |
Publisher |
Chennai: Central Institute of Classical Tamil |
Publish Year |
2024 |
Language |
Kannada |
Book ISBN |
978-81-970237-9-8 |
Number of Pages |
1235 |
Book Price |
Rs.2000.00 |
About the Book:- |
ಡಾ. ಜಯಲಲಿತಾ ತಮಿಳಿನಲ್ಲಿ ಲಭ್ಯವಿರುವ ವ್ಯಾಕರಣ ಗ್ರಂಥಗಳಲ್ಲಿ ತೊಲ್‌ಗಾಪ್ಪಿಯಂ ಅನ್ನು ಮೊದಲ ವ್ಯಾಕರಣ ಗ್ರಂಥವೆಂದು ಪರಿಗಣಿಸಲಾಗಿದೆ. ಸಂಸ್ಕೃತದಲ್ಲಿ ಪಾಣಿನಿಯ ವ್ಯಾಕರಣ ಗ್ರಂಥವು ಎಷ್ಟು ವಿಶಿಷ್ಟವಾಗಿದೆಯೋ ಅದೇ ರೀತಿಯಲ್ಲಿ ತಮಿಳಿನ ತೊಲ್‌ಾಪ್ಪಿಯಂ ಕೂಡ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ವರ್ತಮಾನದಲ್ಲಿ ಪ್ರಕಟಗೊಳ್ಳುತ್ತಿರುವ ಪ್ರಸ್ತುತ ಅನುವಾದವು ಕನ್ನಡ ಮತ್ತು ತಮಿಳು ವ್ಯಾಕರಣವನ್ನು ಕುರಿತು ತೌಲನಿಕ ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ. ಈ ಅನುವಾದ ಕಾರ್ಯವನ್ನು ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರೂ ಹಾಗೂ ಪ್ರಾಧ್ಯಾಪಕರೂ ಆಗಿರುವ ಡಾ.ಟಿಯಲಲಿತಾ ಅವರು ಬಹಳ ಯಶಸ್ವಿಯಾಗಿ ನೆರವೇರಿಸಿಕೊಟ್ಟದ್ದಾರೆ. ಹಾಗಾಗಿ ಶಾಸ್ತ್ರೀಯ ತಮಿಳು ಭಾಷಾ ಕೇಂದ್ರೀಯ ಅಧ್ಯಯನ ಸಂಸ್ಥೆಯ ಪರವಾಗಿ ಅವರಿಗೆ ವಂದನೆಗಳು. ಬಹುಭಾಷಾ ವಿದ್ವಾಂಸರಾದ ಡಾ.ಜಯಲಲಿತಾ ಅವರು ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸಂಶೋಧನೆ ಮತ್ತು ಅನುವಾದ ಕಾರ್ಯಗಳಲ್ಲಿ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ತಮಿಳಿನ ಛಂದೋಗ್ರಂಥವಾದ 'ಯಾಕ್ಷರುಂಗಲಕ್ಕಾ೦ಕ್ಷೆ'ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾತ್ರವಲ್ಲದೆ, ಜಯಕಾಂತನ್, ಇಮಯಂ, ತಮಿಳವನ್ ಮೊದಲಾದವರ ಕತೆ-ಕಾದಂಬರಿಗಳನ್ನೂ ಸಹ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿಗಳು ದೊರೆತಿವೆ. 2006-2007ನೇ ಸಾಲಿನಲ್ಲಿ ಬೆಂಗಳೂರಿನ ತಮಿಳು ಸಂಘಂ 'ಭಾಷಾಂತರ ಸೊಡರು' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಾಗೆಯೇ ಚೆನ್ನೈನ 'ನಲ್ಲಣಕ್ಕೆ ಎಟ್ಟುಮ್' ಅವಾರ್ಡ್, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೆರಳು ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪುಸ್ತಕ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿನಿಧಿ ಬಹುಮಾನ ಮೊದಲಾದವು ಇವರಿಗೆ ಲಭಿಸಿದೆ. ಇಂತಹ ಅನೇಕ ಗೌರವ, ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಡಾ.ಜಯಲಲತಾ ಅವರು ತಮಿಳಿನ ಪ್ರಾಚೀನ ವ್ಯಾಕರಣ ಗ್ರಂಥವಾದ ತೊಲ್‌ಾಪ್ಪಿಯಂನ್ನು ಕನ್ನಡಕ್ಕೆ ಅನುವಾದಿರುವುದು ಸಂತಸವನ್ನು ತಂದಿದೆ |